ಡಾಪ್ಲರ್ ರೇಡಾರ್

	ರೇಡಾರ್ ವ್ಯವಸ್ಥೆಯ ಹಾಗೂ ರೇಡಾರ್ ಲಕ್ಷ್ಯದ ಸಾಪೇಕ್ಷವೇಗವನ್ನು ಅಳೆಯಲು ಬಳಸುವ ಒಂದು ರೇಡಾರ್ ವ್ಯವಸ್ಥೆ. ಲಕ್ಷ್ಯದ ಪ್ರತಿಧ್ವನಿಯ ಡಾಪ್ಲರ್ ಆವೃತ್ತಿಯ ಪಲ್ಲಟವು (ಷಿಫ್ಟ್) ಲಕ್ಷ್ಯ ವೇಗದ ಅರೀಯ ಘಟಕಕ್ಕೆ ಅನುಪಾತೀಯವಾಗಿದೆ ಎಂಬುದನ್ನು ಅವಲಂಬಿಸಿ ಡಾಪ್ಲರ್ ರೇಡಾರ್ ಕೆಲಸ ಮಾಡುತ್ತದೆ. ರೇಡಾರಿನ ತತ್ತ್ವವನ್ನು ಅತಿ ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು: ಯಾವುದೊಂದು ಸ್ಥಳದಲ್ಲಿ ರೇಡಿಯೊ ಅಲೆಗಳನ್ನು ಉತ್ಪಾದಿಸಿ ಅವನ್ನು ತಡೆಗಳತ್ತ (ಲಕ್ಷ್ಯಗಳು) ಕಳಿಸಿ ವುಗಳಿಂದ ಪ್ರತಿಫಲಿತವಾದ ಅಲೆಗಳನ್ನು ಮರಳಿ ಪಡೆದು ಅಲೆಗಳ ಪ್ರಮಾಣಕ್ಕೆ ಬೇಕಾದ ಒಟ್ಟು ಕಾಲವನ್ನು ಕಂಡುಹಿಡಿಯುವುದು. ರೇಡಿಯೊ ಅಲೆಗಳು ವಿದ್ಯುತ್ಕಾಂತೀಯ ಅಲೆಗಳಾದ್ದರಿಂದ ಅವು ಪ್ರಸಾರವಾಗುವ ವೇಗ ಬೆಳಕಿನ ವೇಗ ಛಿ ಆಗಿರುತ್ತದೆ. ಅಲೆಗಳು ಲಕ್ಷ್ಯದಿಂದ (ತಡೆ) ಪ್ರತಿಫಲಿತವಾಗಿ ಪುನಃ ಗ್ರಾಹಕಕ್ಕೆ ಬರಲು ಬೇಕಾದ ಒಟ್ಟು ಕಾಲ ಣ ಎಂದಾದರೆ ಅವು ಕ್ರಮಿಸಿದ ಒಟ್ಟು ದೂರ  2ಖ=ಛಿಣ  ಎಂದಾಗುವುದು. ಆದ್ದರಿಂದ, ರೇಡಾರಿನಿಂದ ಗುರಿಯ ದೂರ 

	ಈ ಆಧುನಿಕ ಉಪಕರಣವನ್ನು ಮಾನವನ ಹೊಸ e್ಞÁನೇಂದ್ರಿಯವೆಂದೇ ಹೇಳಬಹುದು. ಏಕೆಂದರೆ ನಮ್ಮ ದೃಷ್ಟಿಗೆ ಗೋಚರಿಸದ್ದನ್ನು ಇದರಿಂದ ನೋಡಬಹುದಾಗಿದೆ. ಮೋಡಗಳಾಚೆ ಬಲುದೂರದಲ್ಲಿರುವ ವಿಮಾನದಂಥ ವಸ್ತುಗಳು ಯಾವ ದಿಶೆಯಲ್ಲಿ ಎಷ್ಟು ದೂರದಲ್ಲಿವೆ ಎಂಬುದನ್ನು ರೇಡಾರಿನ ಸಹಾಯದಿಂದ ನಿಖರವಾಗಿ ಹೇಳುವುದು ಸಾಧ್ಯ. ರೇಡಾರಿನಲ್ಲಿ ಮುಖ್ಯವಾಗಿ ಇರಬೇಕಾದ ಉಪಕರಣಗಳೆಂದರೆ ಅಲೆಗಳನ್ನು ಕಳುಹಿಸಲು ಬೇಕಾಗುವ ಪ್ರೇಷಕ, ಆ್ಯಂಟೆನ ಮತ್ತು ಲಕ್ಷ್ಯದಿಂದ ಪ್ರತಿಫಲಿತವಾಗಿ ಬಂದ ಅಲೆಗಳನ್ನು ಸಂಗ್ರಹಿಸಲು ಅವಶ್ಯವಿರುವ ಆ್ಯಂಟಿನ ಮತ್ತು ಗ್ರಾಹಕ. 

ಚಿತ್ರ-1

ಆಕಾಶದಲ್ಲಿ ರೇಡಾರಿಗೆ ಸಾಪೇಕ್ಷವಾಗಿ ಸ್ಥಿರವಾಗಿರುವ ಲಕ್ಷ್ಯಗಳನ್ನು ಪತ್ತೆಹಚ್ಚುವುದು ಹೀಗಲ್ಲ. ಏಕೆಂದರೆ, ಅದು ಪ್ರತಿ ಕ್ಷಣ ಮುಂದೆ ಮುಂದೆ ಚಲಿಸುತ್ತಿರುವುದರಿಂದ ಅದರ ಪಥವೀಕ್ಷಣೆ ಮಾಡುವುದು ಸಾಮಾನ್ಯ ರೇಡಾರಿಗೆ ಸಾಧ್ಯವಾಗದು. ಇಂಥ ಪ್ರಸಂಗದಲ್ಲಿ ಡಾಪ್ಲರ್ ತತ್ತ್ವದ ಸಹಾಯ ತೆಗೆದುಕೊಂಡು ಚಲಿಸುತ್ತಿರುವ ತಡೆಯನ್ನು ಪತ್ತೆ ಹಚ್ಚುವುದಲ್ಲದೆ ಅದರ ವೇಗವನ್ನು ಕೂಡ ಶೋಧಿಸುವುದು ಸಾಧ್ಯ.

	ಡಾಪ್ಲರ್ ಪರಿಣಾಮವನ್ನು ಸ್ಥೂಲವಾಗಿ ಈ ರೀತಿ ವಿವರಿಸಬಹುದು. ವಿದ್ಯುತ್ಕಾಂತೀಯ ಅಲೆಗಳ (ಇಲ್ಲವೆ ಶಬ್ದದ) ಆಕರ ಮತ್ತು ಅಲೆಗಳನ್ನು ಗ್ರಹಿಸುವ ಗ್ರಾಹಕ- ಇವೆರೆಡರ ನಡುವೆ ಸಾಪೇಕ್ಷ ವೇಗವಿದ್ದರೆ ಸಂಜ್ಞೆಯ (ಸಿಗ್ನಲ್) ಆವೃತ್ತಿ ಬದಲಾದಂತೆ ತೋರುತ್ತದೆ. ಆಕರ ಮತ್ತು ಗ್ರಾಹಕ ಒಂದನ್ನೊಂದು ಸಮೀಪಿಸುತ್ತಿದ್ದರೆ ಆವೃತ್ತಿ ಮೊದಲಿನ (ಸಾಪೇಕ್ಷವೇಗ ಇಲ್ಲದಾಗಿನ ಸಂಜ್ಞೆಯ) ಆವೃತ್ತಿಗಿಂತ ಹೆಚ್ಚಾದಂತೆಯೂ ಅವುಗಳ ನಡುವಿನ ದೂರ ಹೆಚ್ಚುತ್ತಿದ್ದರೆ ಆವೃತ್ತಿ ಕಡಿಮೆಯಾದಂತೆಯೂ ತೋರುತ್ತದೆ. ರೇಡಾರ್ ಯೋಜನೆಯಲ್ಲಿ ಎರಡು ವಿಧದ ಅಲೆಗಳನ್ನು ಉಪಯೋಗಿಸುತ್ತಾರೆ. ಸ್ಪಂದಿತ ಅಲೆಗಳು (ಪಲ್ಸ್ಡ್ ವೇವ್ಸ್ ) ಮತ್ತು ಅವಿಚ್ಛಿನ್ನ (ಕಂಟಿನ್ಯುವಸ್) ಅಲೆಗಳು. ಮೊದಲ ವಿಧದ ಅಲೆಗಳು ಆಕರದಿಂದ (ಆಂದೋಲಕದಿಂದ) ಬಿಟ್ಟು ಬಿಟ್ಟು ಬರುತ್ತಿರುತ್ತವೆ. ಪ್ರೇಷಕದ ಮೂಲಕ ಇವನ್ನು ಲಕ್ಷ್ಯದತ್ತ ಕಳುಹಿ ಸ್ವಲ್ಪಕಾಲದ ಬಳಿಕ ಗ್ರಾಹಕವನ್ನು ಕಾರ್ಯಗತಮಾಡಿ ಲಕ್ಷ್ಯದಿಂದ ಪ್ರತಿಫಲಿತವಾದ ಅಲೆಗಳನ್ನು ಗ್ರಹಿಸಲಾಗುತ್ತದೆ. ಪ್ರೇಷಿತ ಮತ್ತು ಸ್ವೀಕೃತ ರೇಡಿಯೊ ಸಂಜ್ಞೆಗಳನ್ನು ಅವುಗಳ ನಡುವಿನ ಕಾಲಾವಧಿಯಿಂದ ಗುರುತಿಸಬಹುದು. ಆದರೆ ಲಕ್ಷ್ಯ ಚಲಿಸುತ್ತಿದ್ದರೆ ರೇಡಿಯೊ ಅಲೆಗಳನ್ನು ಅವಿಚ್ಛಿನ್ನವಾಗಿ ಉತ್ಪಾದಿಸಿ ಸಹ ಪರೇಷಿತ ಮತ್ತು ಸ್ವೀಕೃತ ಅಲೆಗಳನ್ನು ಪ್ರಭೇದಿಸಬಹುದಾಗಿದೆ. ಹೇಗೆಂದರೆ, ಚರಲಕ್ಷ್ಯವು ರೇಡಾರಿನ ತಡೆಗೆ ಕಳಿಸುವ ಅಲೆಗಳನ್ನು ಚಲಿಸುತ್ತಿರುವ ರೇಡಿಯೊ ಆಕರವೊಂದರಿಂದ ಬರುವ ಅಲೆಗಳಂದೇ ಭಾವಿಸಬಹುದು. ಹೀಗಾಗಿ ಆಕರ ಮತ್ತು ಗ್ರಾಹಕಗಳ ನಡುವೆ ಸಾಪೇಕ್ಷ ವೇಗವಿರುತ್ತದೆ. ಕಾರಣ ಗ್ರಾಹಕದಲ್ಲಿ ಸ್ವೀಕೃತವಾದ ಸಂಜ್ಞೆಯ ಆವೃತ್ತಿ ಬದಲಾದಂತೆ ತೋರುತ್ತದೆ. ಆಗ ಪ್ರೇಷಿತ ಮತ್ತು ಸ್ವೀಕೃತ ಸಂಜ್ಞೆಗಳನ್ನು ಪ್ರಭೇದಿಸುವುದು ಸುಲಭ ಸಾಧ್ಯ. ರೇಡಾರಿನಿಂದ ಲಕ್ಷ್ಯದ ವರೆಗಿನ ದೂರ ಖ ಎಂದಿದ್ದರೆ, ಅಲೆಗಳು ಗುರಿಗೆ ತಲುಪಿ ಮರಳಿ ಬರುವ ಸಮಗ್ರ ಪಥದಲ್ಲಿ  ಅಲೆಗಳು ಇರುತ್ತವೆ; ಇಲ್ಲಿ (ವು ಅಲೆಗಳ ಅಲೆಯುದ್ದ. ಅಲೆಯೊಂದು (ದಷ್ಟು ಪಥಕ್ರಮಣ ಮಾಡುವುದೆಂದರೆ 2( ರೇಡಿಯನ್ ಕೋನೀಯ ಪಥ ಕ್ರಮಿಸಿದಂತೆ. ಇಂಥ ಕೋನೀಯ ಪಥವನ್ನು ( ನಿಂದ ಸೂಚಿಸೋಣ.  ಪಥದಲ್ಲಿ ಒಟ್ಟು ಕೋನೀಯ ಪಥ ಕ್ರಮಣ  ರೇಡಿಯನ್ ಆಗುತ್ತದೆ. ಲಕ್ಷ್ಯ ಚಲಿಸುತ್ತಿದ್ದರೆ ಖ ಮತ್ತು ( ಸತತವಾಗಿ ಬದಲಾಗುತ್ತಿರುತ್ತವೆ. ಆದ್ದರಿಂದ ( ಅಥವಾ ಖ ಇದನ್ನು ಕಾಲದೊಡನೆ ಬದಲಾಗುವ ಪರಿಮಾಣವೆಂದು ತಿಳಿದು ಆವೃತ್ತಿಯಲ್ಲಿ ಚಲನೆಯಿಂದಾಗುವ ಬದಲಾವಣೆಯನ್ನು ಕಂಡುಹಿಡಿಯಬಹುದು. (ಜ ಡಾಪ್ಲರ್ ಕೋನೀಯ ಆವೃತ್ತಿಯನ್ನು ಸೂಚಿಸುತ್ತಿದ್ದರೆ

ಇಲ್ಲಿ ಜಿಜ=ಡಾಪ್ಲರ್ ಆವೃತ್ತಿ ಪಲ್ಲಟ, vಡಿ=ರೇಡಾರಿಗೆ ಸಾಪೇಕ್ಷವಾಗಿ ಲಕ್ಷ್ಯದ ಅರೀಯ ವೇಗ. ಈಗ ಜಿo ಪ್ರೇಷಿತ ಆವೃತ್ತಿಯಾಗಿದ್ದರೆ ಜಿ0(=ಛಿ ಇರುವುದರಿಂದ ಮೇಲಿನ ಸಮೀಕರಣದಿಂದ

ಜಿಜಯು ಪ್ರತಿಯೊಂದು ಸೆಕೆಂಡಿಗೆ ಚಕ್ರಗಳು, vಡಿ ನಾಟುಗಳು ಮತ್ತು (ಛಿm. ಗಳಲ್ಲಿ ಇದ್ದರೆ

ಎಂದು ಬರುತ್ತದೆ. ಇದರ ಸಹಾಯದಿಂದ ಚಿತ್ರದಲ್ಲಿರುವಂತೆ ಅಲೇಖವನ್ನು ರಚಿಸಲಾಗಿದೆ.
	ಸಾಪೇಕ್ಷ ವೇಗ vಡಿನ್ನು vಡಿ=v ಛಿos ( ಎಂದು ಬರೆಯಬಹುದು. ಇಲ್ಲಿ v ಯು ಲಕ್ಷ್ಯದ ವೇಗ; ( ವು ಲಕ್ಷ್ಯದ ಪಥ ಹಾಗೂ ರೇಡಾರ್ ಮತ್ತು ಲಕ್ಷ್ಯಗಳನ್ನು ಜೋಡಿಸುವ ರೇಖೆ-ಇವುಗಳ ನಡುವಿನ ಕೋನ.  (=0 ಇದ್ದಾಗ ಡಾಪ್ಲರ್ ಆವೃತ್ತಿ ಗರಿಷ್ಠ; (=90o ಇದ್ದಾಗ ಡಾಪ್ಲರ್ ಆವೃತ್ತಿ ಶೂನ್ಯ. ಅಂದರೆ ಲಕ್ಷ್ಯವು ರೇಡಾರ್ ದೃಷ್ಟಿಪಥಕ್ಕೆ ಲಂಬವಾಗಿ ಚಲಿಸುತ್ತಿದ್ದರೆ ಡಾಪ್ಲರ್ ಪಲ್ಲಟ ಶೂನ್ಯ.

	ಅವಿಚ್ಛಿನ್ನ ಅಲೆ ರೇಡಾರಿನ ಕಾರ್ಯವನ್ನು ಈ ಕೆಳಗಿನ ಚಿತ್ರದಿಂದ ತೋರಿಸಬಹುದು. ಪ್ರೇಷಕ ಜಿ0 ಆವೃತ್ತಿಯ ಅಂದೋಲನಗಳನ್ನು ಉತ್ಪಾದಿಸುತ್ತದೆ. ಈ ಶಕ್ತಿಯನ್ನು ಆ್ಯಂಟೆನ ಎಲ್ಲೆಡೆಯಲ್ಲೂ ವಿಸರಿಸುತ್ತದೆ (ರೇಡಿಯೇಟ್ಸ್). ಇಂಥ ಶಕ್ತಿಯ ಕೆಲವು ಭಾಗ ಲಕ್ಷ್ಯಕ್ಕೆ ತಲುಪಿ ಅದರಿಂದ ಚದರಿಸಲ್ಪಡುತ್ತದೆ; ಇದರಲ್ಲಿ ಕೆಲವಷ್ಟು ಭಾಗ ರೇಡಾರಿನತ್ತ ಬರುವುದು. ರೇಡಾರಿನ ಆ್ಯಂಟೆನ ಈ ಶಕ್ತಿಯನ್ನು ಗ್ರಹಿಸುತ್ತದೆ. ಲಕ್ಷ್ಯವು ರೇಡಾರಿನಿಂದ ದೂರಕ್ಕೆ ಚಲಿಸುತ್ತಿದ್ದರೆ ರೇಡಾರಿನ ಸಂಸೂಚಕವು (ಡಿಟೆಕ್ಟರ್) ಮರಳಿ ಬಂದ ಸಂಜ್ಞೆಯ ಆವೃತ್ತಿಯನ್ನು ಜಿ0-ಜಿಜ ಎಂದು ತೋರಿಸುತ್ತದೆ; ಮತ್ತು ಲಕ್ಷ್ಯವು ರೇಡಾರಿನತ್ತ ಬರುತ್ತಿದ್ದರೆ ಸಂಜ್ಞೆಯ ಆವೃತ್ತಿ ಜಿ0+ಜಿಜ ಇರುತ್ತದೆ. ಮರಳಿಬಂದ ಸಂಜ್ಞೆಯ ಸಾಮಥ್ರ್ಯವನ್ನು ಹೆಚ್ಚಿಸಲೋಸುಗ ಪ್ರವರ್ಧಕವನ್ನು ಉಪಯೋಗಿಸುತ್ತಾರೆ. 

ಚಿತ್ರ-2

ಇಂಥ ಪ್ರವರ್ಧಿತ ಸಂಜ್ಞೆ ಯಾವುದಾದರೊಂದು ಸೂಚಕದ ಮುಳ್ಳನ್ನು ಸರಿಸಲು ಶಕ್ತವಾಗುತ್ತದೆ. ಈ ಸೂಚಕ ಸಾಮಾನ್ಯವಾಗಿ ಕರ್ಣಫೋನ್ (ಇಯರ್ ಫೋನ್) ಇಲ್ಲವೆ ಆವೃತ್ತಿಮಾಪಕ. ಡಾಪ್ಲರ್ ಆವ್ಲತ್ತಿಯ ಪಲ್ಲಟದ ನಿಖರ e್ಞÁನಬೇಕಾಗದೆ ಇದ್ದ ಪಕ್ಷದಲ್ಲಿ ಕರ್ಣಫೋನ್ ಒಳ್ಳೆ ಸಾಧನೆ. ಆದರೆ ಆಗ ಆವೃತ್ತಿಯು ಶ್ರವಣವ್ಯಾಪ್ತಿಯಲ್ಲಿ ಇರಬೇಕಾಗುತ್ತದೆ. ಕೆಲವೊಂದು ಬಾರಿ ಡಾಪ್ಲರ್ ಆವೃತ್ತಿ ಈ ವ್ಯಾಪ್ತಿಯಲ್ಲಿ ಇರದಿದ್ದರೂ ಹೆಟೆರೊಡೈನ್ ತತ್ತ್ವದಿಂದ ಆವೃತ್ತಿಯನ್ನು ಆ ವ್ಯಾಪ್ತಿಯಲ್ಲಿ ಬರುವಂತೆ ಅಳವಡಿಸಬಹುದು.

	ಚಲಿಸುತ್ತಿರುವ ಲಕ್ಷ್ಯಗಳನ್ನು ಪತ್ತೆಹಚ್ಚಲು ಅವಿಚ್ಛಿನ್ನ ಅಲೆ ರೇಡಾರನ್ನು ಉಪಯೋಗಿಸುವಂತೆಯೆ ಸ್ಪಂದಿತ ಅಲೆ ರೇಡಾರನ್ನು ಸಹ ಈ ಕಾರ್ಯಕ್ಕಾಗಿ ಬಳಸಬಹುದು. ಇಂಥ ರೇಡಾರಿಗೆ ಚಲಿಸುತ್ತಿರುವ ಲಕ್ಷ್ಯಸೂಚನೆ ಅಥವಾ ಡಾಪ್ಲರ್ ಸ್ಪಂದನ ರೇಡಾರ್ ಎಂದು ಹೆಸರು. (ಇವೆರಡರಲ್ಲೂ ಸೂಕ್ಷ್ಮ ವ್ಯತ್ಯಾಸವಿದೆ). ಡಾಪ್ಲರ್ ಸ್ಪಂದನ ರೇಡಾರ್ ಮತ್ತು ಸಾಮಾನ್ಯ ಸ್ಪಂದನ ರೇಡಾರ್ ಇವುಗಳ ವ್ಯತ್ಯಾಸವಿಷ್ಟೆ: ಚಲಿಸುತ್ತಿರುವ ಲಕ್ಷ್ಯಗಳಿಂದ ಎಷ್ಟೊ ಪಟ್ಟು ಹೆಚ್ಚಿನ ಶಕ್ತಿಯುತ "ಪ್ರತಿಧ್ವನಿ" ಬರುತ್ತಿರುವಾಗ ಕೂಡ ಚಲಿಸುತ್ತಿರುವ ಲಕ್ಷ್ಯಗಳನ್ನು ಪ್ರಭೇದಿಸಿ ಶೋಧಿಸುವುದು ಇದರಿಂದ ಸಾಧ್ಯ. ಸ್ಥಿರ ಲಕ್ಷ್ಯಗಳಿಂದ ಬರುವ ಪ್ರತಿಧ್ವನಿ ಚಲಿಸುತ್ತಿರುವ ಲಕ್ಷ್ಯದಿಂದ ಬರುವ ಪ್ರತಿಧ್ವನಿಗಿಂತ 80-90 ಡೆಸಿಬೆಲ್ಸ್ ಹೆಚ್ಚು ಇದ್ದಾಗ ಕೂಡ ಕೆಲವೊಂದು ಸ್ಪಂದಿತಅಲೆ ಡಾಪ್ಲರ್ ರೇಡಾರುಗಳು ಚಲಿಸುತ್ತಿರುವ ಲಕ್ಷ್ಯಗಳನ್ನು ಶೋಧಿಸಬಲ್ಲವಾಗಿರುತ್ತವೆ. ಅವಿಚ್ಛಿನ್ನ ಅಲೆ ಡಾಪ್ಲರ್ ರೇಡಾರ್ ಮತ್ತು ಸ್ಪಂದಿತ ಅಲೆ ಡಾಪ್ಲರ್ ರೇಡಾರುಗಳ ಉಪಯುಕ್ತತೆಗಳನ್ನು ಸಂಕ್ಷಿಪ್ತದಲ್ಲಿ ಹೀಗೆ ಹೋಲಿಸಿ ನೋಡಬಹುದು. ಸಾಧಾರಣವಾಗಿ ಸಮೀಪದ ಲಕ್ಷ್ಯಗಳನ್ನು ಪತ್ತೆಹಚ್ಚುವುದಾದರೆ ಸ್ಪಂದಿತ ಅಲೆ ರೇಡಾರಿಗಿಂತ ಅವಿಚ್ಛಿನ್ನ ಅಲೆ ರೇಡಾರ್ ಹೆಚ್ಚು ಪ್ರಯೋಜನಕಾರಿ. ಏಕೆಂದರೆ, ಅವಿಚ್ಛಿನ್ನ ಅಲೆ ರೇಡಾರ್ ಬಳಸುವ ಉಪಕರಣ ಸರಳವಾದುದು. ಅವಿಚ್ಛಿನ್ನ ಅಲೆ ಮತ್ತು ಸ್ಪಂದಿತ ಅಲೆ ರೇಡಾರಿನಂತೆ ದೂರವನ್ನು ನಿರ್ಧರಿಸಲಾರದು. ಅವಿಚ್ಛಿನ್ನ ಅಲೆ ರೇಡಾರ್ ಲಕ್ಷ್ಯಗಳ ಅಂತರ ಅತ್ಯಲ್ಪವಿದ್ದಾಗ ಕೂಡ ಅವನ್ನು ಪತ್ತೆ ಹಚ್ಚಬಲ್ಲುದು. ಆದರೆ ಸ್ಪಂದಿತ ಅಲೆಯ ಕನಿಷ್ಠ ದೂರ, ಸ್ಪಂದನ ಅಲೆ ಆಕಾಶದಲ್ಲಿ ಎಷ್ಟು ಸ್ಥಾನವನ್ನು ಆಕ್ರಮಿಸುತ್ತದೆ ಎನ್ನುವುದನ್ನು ಅವಲಂಬಿಸಿರುತ್ತದೆ. ಈ ಮೇಲಿನ ವಿವೇಚನೆಯಲ್ಲೆಲ್ಲ ರೇಡಾರ್ ಉಪಕರಣ ಭೂಮಿಗೆ ಸಾಪೇಕ್ಷವಾಗಿ ಸ್ಥಿರವೆಂದೇ ಭಾವಿಸಲಾಗಿದೆ. ಆದರೆ ಇಂಥ ಸ್ಥಿರ ರೇಡಾರ್ ವೈರಿಗಳ ವಿಮಾನಗಳನ್ನು ಅಥವಾ ಹಡಗುಗಳನ್ನು ಪತ್ತೆಹಚ್ಚುವಾಗ ಅಷ್ಟೊಂದು ಪ್ರಯೋಜನಕಾರಿ ಆಗಲಾರದು. ಆಗ ರೇಡಾರನ್ನು ಹಡಗಿನಲ್ಲಾಗಲಿ ವಿಮಾನದಲ್ಲಾಗಲಿ ಇರಿಸಿ ವೈರಿಯನ್ನು ಬೆಂಬತ್ತ ಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ, ಮೊದಲು ಸ್ಥಿರವಿದ್ದ ಲಕ್ಷ್ಯಗಳು [ಅವಕ್ಕೆ ಈಗ ತಡೆ (ಕ್ಲಟರ್) ಎನ್ನೋಣ] ಈಗ ಸಾಪೇಕ್ಷ ವೇಗವನ್ನು ಪಡೆದಿರುತ್ತವೆ. ಕಾರಣ ಲಕ್ಷ್ಯಗಳನ್ನು ತಡೆಗಳಿಂದ ಪ್ರಭೇದಿಸುವುದು ದುಸ್ತರವಾಗುತ್ತದೆ. ಆದರೂ ತಡೆ ಮತ್ತು ರೇಡಾರ್ ಇವುಗಳ ಸಾಪೇಕ್ಷ ವೇಗ ಚಲಿಸುತ್ತಿರುವ ಲಕ್ಷ್ಯ ಮತ್ತು ರೇಡಾರುಗಳ ಸಾಪೇಕ್ಷ ವೇಗ ಬೇರೆ ಬೇರೆ ಇರುವುದರಿಂದ ಎರಡೂ ಲಕ್ಷ್ಯಗಳಿಂದ ಉಂಟಾಗುವ ಡಾಪ್ಲರ್ ಪಲ್ಲಟಗಳು ಬೇರೆ ಬೇರೆ ಇರುತ್ತವೆ. ಕಾರಣ ಅವೆರಡನ್ನೂ ಪ್ರಭೇದಿಸಿ ಚಲಿಸುತ್ತಿರುವ ಲಕ್ಷ್ಯವನ್ನು ಪತ್ತೆಹಚ್ಚಬಹುದು.

	ಈ ಮೇಲೆ ಹೇಳಿದುದೆಲ್ಲ ಲಕ್ಷ್ಯದ ಸಾಪೇಕ್ಷ ವೇಗ vಡಿ ಸ್ಥಿರವೆಂದು ಭಾವಿಸಿ ಹೇಳಿದುದು: ವೇಗ ಬದಲಾಗುತ್ತಿದ್ದರೆ, ಅಂದರೆ ಲಕ್ಷ್ಯದ ಚಲನೆ ವೇಗೋತ್ಕರ್ಷಿತವಿದ್ದರೆ ಡಾಪ್ಲರ್ ಆವೃತ್ತಿ ಬದಲಾವಣೆಯಾಗುತ್ತದೆ. ಸಾಪೇಕ್ಷ ವೇಗ (ಣ ಕಾಲದಲ್ಲಿ ( vಡಿ ನಷ್ಟು ಬದಲಾಗುತ್ತಿದ್ದರೆ  ಚಲನೆಯ ವೇಗೋತ್ಕರ್ಷ. ಆದ್ದರಿಂದ ಡಾಪ್ಲರ್ ಪಲ್ಲಟದಲ್ಲಿ ಆಗುವ ಬದಲಾವಣೆ

	ಈ ಸಮೀಕರಣದ ಸಹಾಯದಿಂದ ಡಾಪ್ಲರ್ ಆವೃತ್ತಿಯಲ್ಲಿ (ಣ ಕಾಲದಲ್ಲಿ ಆಗುವ ಬದಲಾವಣೆಯನ್ನು ವೀಕ್ಷಿಸಿ ಚಲನೆಯ ವೇಗೋತ್ಕರ್ಷವನ್ನು ಶೋಧಿಸಬಹುದು. ಡಾಪ್ಲರ್ ರೇಡಾರಿನ ಉಪಯುಕ್ತತೆ ಕೇವಲ ಯುದ್ಧಗಳಲ್ಲಿ ಎಂದಲ್ಲ. ಆಧುನಿಕ ವಿe್ಞÁನದ ಪ್ರಗತಿಯನ್ನು ಸೂಚಿಸುವ ಕ್ಷಿಪಣಿಗಳು, ಉಪಗ್ರಹಗಳು, ಆಕಾಶ ನಿಲ್ದಾಣಗಳು ಮುಂತಾದವುಗಳ ಪಥವೀಕ್ಷಣೆಯನ್ನು ಮಾಡುವಲ್ಲಿ ಕೂಡ ಡಾಪ್ಲರ್ ರೇಡಾರ್ ಅತ್ಯಂತ ಪ್ರಯೋಜನಕಾರಿ. (ವಿ.ಎಂ.ಕೆ.) (ಪರಿಷ್ಕರಣೆ: ಹೆಚ್.ಆರ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ